ನನ್ನ ಆತ್ಮೀಯ ಅಥವಾ ಗೆಳೆಯರ ಕಥಾ ಭಾಗ 1: -
ಪೂರ್ತಿ ಕಥೆಯನ್ನು ಓದಿ ನಿಮ್ಮ ಜೀವನದಲ್ಲಿ ನೀವು ಯಶಸ್ಸನ್ನು ಕಾಣಿ .
ಇಂತಿ ನಿಮ್ಮ ಮಹೇಶ್ ಪಟ್ಟೇದ,
ಆನಂದ್ ಮಾನ ಶೆಟ್ಟರ್ ಇವನೊಬ್ಬ ತುಂಟ ಹುಡುಗ ನಾವಿಬ್ಬರೂ ಕೂಡ ಹಲವಾರು ಬಾರಿ ಅವನ ಗೆಳೆಯರು ಹಾಗೂ ನಮ್ಮ ಗೆಳೆಯರು ಎಲ್ಲರೂ ನಮ್ಮ ನ್ಯಾಯಾಲಯದ ಕೋರ್ಟ್ ಕ್ವಾಟ್ರಸ್ ನಲ್ಲಿ ಕೇವಲ ಕ್ರಿಕೆಟ್ ನಲ್ಲಿ ಸಮಯವನ್ನು ಕಳೆದು ಅನೇಕ ಸಂಗತಿಗಳು ಇನ್ನೂ ಕಣ್ಣು ಮುಂದೆ ಹಾಗೆ ಕಂಡುಬರುತ್ತವೆ.
ಹೀಗೆ ಜಗತ್ತನ್ನೇ ಅರಿಯದ ಹಾಗೆ ನಾವೆಲ್ಲರೂ ಇದ್ದೆವು. ಎಲ್ಲರೂ ಸುಮಾರು 10 ವರ್ಷಗಳ ಕಾಲ ಯಲಬುರ್ಗಾದ ಸಿದ್ದರಾಮೇಶ್ವರ ಶಾಲೆಯಲ್ಲಿ ಕಲಿತು ಎಸೆಸೆಲ್ಸಿ ಮುಗಿಸಿ ನಂತರ ಕಾಲೇಜು ಮತ್ತು ಪದವಿ ಶಿಕ್ಷಣವನ್ನು ಮುಗಿಸಿ ಯಶಸ್ವಿಯಾಗಿ ಶಾಲಾಶಿಕ್ಷಣವನ್ನು ಅಂತು ಇಂತು ಮುಗಿಸಿದೆವು.
ನಂತರದಲ್ಲಿ ಅದೊಂದು ದಿನ ಆನಂದ್ ಅವರ ತಂದೆ ಅಕಾಲಿಕವಾಗಿ ಮರಣವನ್ನು ಹೊಂದಿದರು. ಅವರ ಕುಟುಂಬಕ್ಕೆ ಬರಸಿಡಿಲಿನಂತೆ ಬಂದ ವಿಷಯ ಇದು ಆಗಿರಬಹುದು ಮೂಲತಹ ರೈತ ಕುಟುಂಬದಿಂದ ಬಂದಿರುವ ಅವರು ಮೂರು ಗಂಡು ಮಕ್ಕಳು ಈಗ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಮೊದಲಿಗೆ ಇವರ ಮನೆಯಲ್ಲಿ ಇವರ ಹಿರಿಯ ಅಣ್ಣನಾದ ಬಾಳನಗೌಡ ಮಾನ ಶೆಟ್ಟರ್ ಅವರು ಕೊಪ್ಪಳದ ಭ್ರಷ್ಟಾಚಾರ ನಿಗ್ರಹ ಕಾರ್ಯದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನೊಬ್ಬ ಅಣ್ಣ ಪ್ರಕಾಶ ಕೂಡ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಇಡೀ ಕುಟುಂಬ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಇವರೆಲ್ಲರ ಪರಿಶ್ರಮದಿಂದ ಈಗ ಮನೆಯವರೆಲ್ಲರೂ ಮತ್ತು ತಾವು ಅತ್ಯಂತ ನಿರಾಯಾಸವಾಗಿ ಜೀವನವನ್ನು ಸಾಗಿಸುತ್ತಿದ್ದಾರೆ. ನಾನು ಯಲಬುರ್ಗಾದಲ್ಲಿ ಪ್ರಾರಂಭಿಸಿದ ನೂತನ ಸ್ಟಡಿ ಸರ್ಕಲ್ ಎಂಬ ಸಂಸ್ಥೆ ಕೇವಲ 16 ವಿದ್ಯಾರ್ಥಿಗಳಿಂದ ಪ್ರಾರಂಭವಾಗಿ ಈಗ ಸುಮಾರು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕೊಡುವುದರಲ್ಲಿ ಎಲ್ಲರ ಕೂಡ ಸಹಾಯ& ಶ್ರಮ ಇದೆ.
ಗುರುವಾರ 2ಗಂಟೆಗೆ ಅನ್ ಅಕಾಡೆಮಿಯಲ್ಲಿ ಲೈವ್ ಬರುವ ನನ್ನ ಆತ್ಮೀಯ ಗೆಳೆಯ ಒಂದೇ ಊರಿನವರು ಆನಂದ ಮಾನಶೆಟ್ಟರ್,ಸಬ್ ಇನಸ್ ಪೆಕ್ಟರ್ ,ಬೆಂಗಳೂರು ನಗರ, ಈಗ ಇಲ್ಲಿ ಸುಮಾರು ವರ್ಷಗಳಿಂದ ಸಿವಿಲ್ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದು ಕೇವಲ ನನ್ನ ಒಂದು ಚಿಕ್ಕ ಕವನ ಕೇವಲ ಇವರ ಪರಿಚಯವನ್ನು ನಾನು ಮಾಡಿಕೊಟ್ಟಿದ್ದೇನೆ ಇದರ ಹಿಂದೆ ಇರುವ ಎಲ್ಲ ಕಠಿಣ ಪರಿಶ್ರಮಗಳು ಈಗ ಇವರ ಯಶೋಗಾಥೆಯನ್ನು ತಿಳಿಸುತ್ತದೆ.ಈ ರೀತಿ ಯಾವುದೇ ಗ್ರಾಮೀಣ ಭಾಗದವರು ಎಂದು ನೀವು ತಿಳಿಯದೆ ಎಲ್ಲರೂ ಕೂಡ ಬಡತನವನ್ನು ಮೀರಿ ಕಷ್ಟಗಳನ್ನು ಮೀರಿ ತೊಂದರೆಗಳನ್ನು ಮರೆತು ಸಮಯಕ್ಕೆ ಬೆಲೆಕೊಟ್ಟು ಅನ ಅಕಾಡೆಮಿ ಹಲವಾರು ಉತ್ತಮ ಶಿಕ್ಷಕರು ಪಾಠವನ್ನು ಮಾಡುತ್ತಿದ್ದಾರೆ .ಅವರ ಎಲ್ಲಾ ಪಾಠಗಳನ್ನು ಕೇಳಿ ಗಳನ್ನು ನೊಟ್ಸ ಮಾಡಿಕೊಂಡು ನಿಮ್ಮ ಜೀವನದಲ್ಲಿ ನೀವು ಕೂಡ ಯಶಸ್ಸನ್ನು ಕಾಣಲಿ ಅಂತ ಹೇಳುತ್ತಾ ನನ್ನ ಮೊದಲನೆಯ ಕಥಾಭಾಗವನ್ನು ಮುಗಿಸುತ್ತೇನೆ.
Mahesh Patted ,M.Sc.B.Ed & Journalism,
ಜ.ಸಾ.......🙏🙏🙏🙏🙏🙏
No comments:
Post a Comment