#ನನ್ನ ಆತ್ಮೀಯ ಗೆಳೆಯನ ಯಶೋಗಾಥೆಯ ಕಥೆ ಭಾಗ- 4
ರವಿವಾರ ಮಧ್ಯಾಹ್ನ #2:00PM ಗೆ ಅನ್ ಅಕಾಡೆಮಿಯಲ್ಲಿ ಲೈವ್ ಬರುವವರ ಹೆಸರು ಶ್ರೀಯುತ ಗುರುರಾಜ್ ಚಲವಾದಿ( 2017- ಬ್ಯಾಚ್ KAS ) ಈತ ಮತ್ತು ನಾನು ಒಂದೇ ಊರಿನ ಯಲಬುರ್ಗಾ ದವರು ಒಂದೇ ಶಾಲೆಯಲ್ಲಿ 13 ವರ್ಷ ಕಲಿತ ಗೆಳೆಯರು.
ಬಹುತೇಕವಾಗಿ ಯಲಬುರ್ಗಾ ತಾಲೂಕ ಕ್ರೀಡಾಂಗಣದಲ್ಲಿ ಪ್ರತಿದಿವಸ ಮುಂಜಾನೆ ಮತ್ತು ಸಾಯಂಕಾಲ ಯಾವಾಗಲೂ ಕಳೆದ ನೆನಪುಗಳು ಕ್ರಿಕೆಟ್ ನಮಗೆಲ್ಲರಿಗೂ ಎಲ್ಲಿಲ್ಲದ ಹುಚ್ಚು. ಪದವಿ ಮುಗಿಸಿದ ನಂತರ ಗುರುರಾಜ್ ಸಮಾಜ ಕಲ್ಯಾಣ ಇಲಾಖೆಯ ಕರೆದ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗಿ ಅದರಲ್ಲಿ ತರಬೇತಿಯನ್ನು ಪಡೆದು ತಯಾರಿಯನ್ನು ನಡೆಸಿದ್ದರು.
ಮೊದಲಿಗೆ ಇವರಿಗೆ SDA,FDA ಮತ್ತು ರೈಲ್ವೆ ಇಲಾಖೆಯಲ್ಲಿ ಸರಕಾರಿ ಹುದ್ದೆಗಳನ್ನು ಯಶಸ್ವಿಯಾಗಿ ಪಡೆದುಕೊಂಡಿದ್ದರು. ನಂತರದಲ್ಲಿ ಕೊಪ್ಪಳದ ಕೈಗಾರಿಕಾ ಇಲಾಖೆಯಲ್ಲಿ FDA ಆಗಿ ಕಾರ್ಯ ನಿರ್ವಹಿಸುತ್ತಾ ತಮ್ಮ ಛಲವನ್ನು ಬಿಡದೆ ಸದಾ ಓದುತ್ತಾ ನಮ್ಮ ಯಲಬುರ್ಗಾ ದಿಂದ ತಹಸಿಲ್ದಾರ ಆಯ್ಕೆಯಾಗಿ ಯಶಸ್ವಿಯನ್ನು ಕಂಡಿದ್ದಾನೆ.
ರವಿವಾರ ಮಧ್ಯಾಹ್ನ 2Pm ಎಲ್ಲರೂ ಕೂಡ ಭಾಗವಹಿಸಿ ಇವರ ಅಮೂಲ್ಯವಾದ ಮಾತುಗಳನ್ನು ಮತ್ತು ತರಬೇತಿಯ ಅನುಭವಗಳನ್ನು ಪುಸ್ತಕಗಳನ್ನು ಯಾವ ರೀತಿ ಓದಬೇಕು ಮತ್ತು sda-fda , ರೈಲ್ವೆ ಇಲಾಖೆ ಮತ್ತು .ಕೆ.ಎ.ಎಸ್ ಗೆ ಯಾವ ರೀತಿ ಪುಸ್ತಕಗಳನ್ನು ಹೇಗೆ ?ಎಷ್ಟು ?ಏನು?ಓದಬೇಕು ಎಂಬುದನ್ನು ಇವರಿಂದ ನಾವು ಕೇಳೋಣ .
ದಯವಿಟ್ಟು ಎಲ್ಲರೂ ಕೂಡ ತಪ್ಪದೆ ಭಾಗವಹಿಸಿ.
ಇಂತಿ ನಿಮ್ಮೆಲ್ಲರ ,
Mahesh Patted ,
Edcator@Uncademy
Thank You All
No comments:
Post a Comment