Tuesday, 29 June 2021

"/ತಹಶೀಲ್ದಾರ‌‌‌ ಹುದ್ದೆಗೆ ಆಯ್ಕೆಯಾದ‌ ಗ್ರಾಮೀಣ ಭಾಗದ ಯುವಕನ ಕಥೆ " ಗುರುರಾಜ ಛಲವಾದಿ #

 


#ನನ್ನ ಆತ್ಮೀಯ ಗೆಳೆಯನ ಯಶೋಗಾಥೆಯ ಕಥೆ ಭಾಗ- 4 

ರವಿವಾರ ಮಧ್ಯಾಹ್ನ #2:00PM ಗೆ  ಅನ್ ಅಕಾಡೆಮಿಯಲ್ಲಿ ಲೈವ್ ಬರುವವರ ಹೆಸರು ಶ್ರೀಯುತ ಗುರುರಾಜ್ ಚಲವಾದಿ( 2017- ಬ್ಯಾಚ್ KAS ) ಈತ ಮತ್ತು ನಾನು ಒಂದೇ ಊರಿನ ಯಲಬುರ್ಗಾ ದವರು ಒಂದೇ ಶಾಲೆಯಲ್ಲಿ 13 ವರ್ಷ ಕಲಿತ ಗೆಳೆಯರು.
ಬಹುತೇಕವಾಗಿ ಯಲಬುರ್ಗಾ ತಾಲೂಕ ಕ್ರೀಡಾಂಗಣದಲ್ಲಿ ಪ್ರತಿದಿವಸ ಮುಂಜಾನೆ ಮತ್ತು ಸಾಯಂಕಾಲ ಯಾವಾಗಲೂ ಕಳೆದ ನೆನಪುಗಳು ಕ್ರಿಕೆಟ್ ನಮಗೆಲ್ಲರಿಗೂ ಎಲ್ಲಿಲ್ಲದ ಹುಚ್ಚು. ಪದವಿ ಮುಗಿಸಿದ ನಂತರ ಗುರುರಾಜ್ ಸಮಾಜ ಕಲ್ಯಾಣ ಇಲಾಖೆಯ ಕರೆದ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗಿ ಅದರಲ್ಲಿ ತರಬೇತಿಯನ್ನು ಪಡೆದು ತಯಾರಿಯನ್ನು ನಡೆಸಿದ್ದರು.

ಮೊದಲಿಗೆ ಇವರಿಗೆ SDA,FDA  ಮತ್ತು ರೈಲ್ವೆ ಇಲಾಖೆಯಲ್ಲಿ ಸರಕಾರಿ ಹುದ್ದೆಗಳನ್ನು ಯಶಸ್ವಿಯಾಗಿ ಪಡೆದುಕೊಂಡಿದ್ದರು. ನಂತರದಲ್ಲಿ ಕೊಪ್ಪಳದ ಕೈಗಾರಿಕಾ ಇಲಾಖೆಯಲ್ಲಿ FDA ಆಗಿ ಕಾರ್ಯ ನಿರ್ವಹಿಸುತ್ತಾ ತಮ್ಮ ಛಲವನ್ನು ಬಿಡದೆ ಸದಾ ಓದುತ್ತಾ ನಮ್ಮ ಯಲಬುರ್ಗಾ ದಿಂದ ತಹಸಿಲ್ದಾರ ಆಯ್ಕೆಯಾಗಿ ಯಶಸ್ವಿಯನ್ನು ಕಂಡಿದ್ದಾನೆ.

ರವಿವಾರ ಮಧ್ಯಾಹ್ನ 2Pm  ಎಲ್ಲರೂ ಕೂಡ ಭಾಗವಹಿಸಿ ಇವರ ಅಮೂಲ್ಯವಾದ ಮಾತುಗಳನ್ನು ಮತ್ತು ತರಬೇತಿಯ ಅನುಭವಗಳನ್ನು ಪುಸ್ತಕಗಳನ್ನು ಯಾವ ರೀತಿ ಓದಬೇಕು ಮತ್ತು sda-fda , ರೈಲ್ವೆ ಇಲಾಖೆ ಮತ್ತು .ಕೆ.ಎ.ಎಸ್ ಗೆ ಯಾವ ರೀತಿ ಪುಸ್ತಕಗಳನ್ನು ಹೇಗೆ ?ಎಷ್ಟು ?ಏನು?ಓದಬೇಕು ಎಂಬುದನ್ನು ಇವರಿಂದ ನಾವು ಕೇಳೋಣ .
ದಯವಿಟ್ಟು ಎಲ್ಲರೂ ಕೂಡ ತಪ್ಪದೆ ಭಾಗವಹಿಸಿ.

ಇಂತಿ ನಿಮ್ಮೆಲ್ಲರ ,
Mahesh Patted ,
Edcator@Uncademy 

Thank You All

Thursday, 24 June 2021

" ನಮ್ಮ‌ಆತ್ಮೀಯರ/ಗೆಳೆಯರ ಯಶೋಗಾಥೆಯ ಕಥೆ - ಭಾಗ-2 "

 

ನಮ್ಮ ಆತ್ಮೀಯರ / ಗೆಳೆಯರ /ಯಶೋಗಾಥೆ- ಭಾಗ - 2 


*ಮೂಲತಹ ಬೆಳಗಾವಿಯ ಡಾ.ಸಿ.ಐ. ಚಲವಾದಿ ಸರ್,‌ಸಹಾಯಕ ಪ್ರಾಧ್ಯಾಪಕರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ.


ಇವರು ಬಳ್ಳಾರಿ ಭಾಗದಲ್ಲಿ ಮತ್ತು ಸಂಡೂರು ಭಾಗದಲ್ಲಿ ಸಾವಿರಾರು  ವಿದ್ಯಾರ್ಥಿಗಳಿಗೆ ಸುಮಾರು ವರ್ಷಗಳಿಂದ ದಾರಿದೀಪವಾಗಿ ಈಗ ಯಲಬುರ್ಗಾ ನಗರದಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ .


ನಮ್ಮ ಆತ್ಮೀಯ ಗೆಳೆಯರು ಮತ್ತು ನಮ್ಮ ಮಾರ್ಗದರ್ಶಕರು ಆದ ಇವರ ಕೆಳಗಡೆ ಈಗಾಗಲೇ 6 ವಿದ್ಯಾರ್ಥಿಗಳು  P.hd. ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾರೆ ಮತ್ತು ಹಲವಾರು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಲೇಖನಗಳನ್ನು ಬರೆದು K-SET& UGC-NET ಪರೀಕ್ಷೆಗಳನ್ನು ಪಾಸಾಗಿ ಅತ್ಯಂತ ಯಶಸ್ವಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. 


ಇವರು ಅನ್ ಅಕಾಡೆಮಿ ಯಲ್ಲಿ  Mahesh Patted sir ಜೊತೆ ಲೈವ್ ಬರುವುದು ನಮ್ಮ ಗ್ರಾಮೀಣ ವಿದ್ಯಾರ್ಥಿಗಳಿಗೆ ಅತ್ಯಂತ ಸಂತೋಷಕರ ಸಂಗತಿ‌.


Mahesh Patted 

Educator,Unacademy.

Wednesday, 23 June 2021

ನೀವೂ PSI /PC ಆಗಬೇಗೆ ?




ನನ್ನ  ಆತ್ಮೀಯ ಅಥವಾ ಗೆಳೆಯರ ಕಥಾ ಭಾಗ 1: - 


ಪೂರ್ತಿ ಕಥೆಯನ್ನು ಓದಿ ನಿಮ್ಮ ಜೀವನದಲ್ಲಿ ನೀವು ಯಶಸ್ಸನ್ನು ಕಾಣಿ .

ಇಂತಿ ನಿಮ್ಮ ಮಹೇಶ್ ಪಟ್ಟೇದ,


ಆನಂದ್ ಮಾನ ಶೆಟ್ಟರ್ ಇವನೊಬ್ಬ ತುಂಟ ಹುಡುಗ ನಾವಿಬ್ಬರೂ ಕೂಡ ಹಲವಾರು ಬಾರಿ ಅವನ ಗೆಳೆಯರು ಹಾಗೂ ನಮ್ಮ ಗೆಳೆಯರು ಎಲ್ಲರೂ ನಮ್ಮ ನ್ಯಾಯಾಲಯದ ಕೋರ್ಟ್ ಕ್ವಾಟ್ರಸ್ ನಲ್ಲಿ ಕೇವಲ ಕ್ರಿಕೆಟ್ ನಲ್ಲಿ ಸಮಯವನ್ನು ಕಳೆದು ಅನೇಕ ಸಂಗತಿಗಳು ಇನ್ನೂ ಕಣ್ಣು ಮುಂದೆ ಹಾಗೆ ಕಂಡುಬರುತ್ತವೆ.

ಹೀಗೆ ಜಗತ್ತನ್ನೇ ಅರಿಯದ ಹಾಗೆ ನಾವೆಲ್ಲರೂ ಇದ್ದೆವು. ಎಲ್ಲರೂ ಸುಮಾರು 10 ವರ್ಷಗಳ ಕಾಲ ಯಲಬುರ್ಗಾದ ಸಿದ್ದರಾಮೇಶ್ವರ ಶಾಲೆಯಲ್ಲಿ ಕಲಿತು ಎಸೆಸೆಲ್ಸಿ ಮುಗಿಸಿ ನಂತರ ಕಾಲೇಜು ಮತ್ತು ಪದವಿ ಶಿಕ್ಷಣವನ್ನು ಮುಗಿಸಿ ಯಶಸ್ವಿಯಾಗಿ ಶಾಲಾಶಿಕ್ಷಣವನ್ನು ಅಂತು ಇಂತು ಮುಗಿಸಿದೆವು.


ನಂತರದಲ್ಲಿ ಅದೊಂದು ದಿನ ಆನಂದ್  ಅವರ ತಂದೆ ಅಕಾಲಿಕವಾಗಿ ಮರಣವನ್ನು ಹೊಂದಿದರು. ಅವರ ಕುಟುಂಬಕ್ಕೆ ಬರಸಿಡಿಲಿನಂತೆ ಬಂದ ವಿಷಯ ಇದು ಆಗಿರಬಹುದು ಮೂಲತಹ ರೈತ ಕುಟುಂಬದಿಂದ ಬಂದಿರುವ ಅವರು ಮೂರು ಗಂಡು ಮಕ್ಕಳು ಈಗ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.


ಮೊದಲಿಗೆ ಇವರ ಮನೆಯಲ್ಲಿ ಇವರ ಹಿರಿಯ ಅಣ್ಣನಾದ ಬಾಳನಗೌಡ ಮಾನ ಶೆಟ್ಟರ್ ಅವರು ಕೊಪ್ಪಳದ ಭ್ರಷ್ಟಾಚಾರ ನಿಗ್ರಹ ಕಾರ್ಯದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 ಇನ್ನೊಬ್ಬ ಅಣ್ಣ ಪ್ರಕಾಶ  ಕೂಡ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಇಡೀ ಕುಟುಂಬ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಇವರೆಲ್ಲರ ಪರಿಶ್ರಮದಿಂದ ಈಗ ಮನೆಯವರೆಲ್ಲರೂ ಮತ್ತು ತಾವು ಅತ್ಯಂತ ನಿರಾಯಾಸವಾಗಿ ಜೀವನವನ್ನು ಸಾಗಿಸುತ್ತಿದ್ದಾರೆ. ನಾನು ಯಲಬುರ್ಗಾದಲ್ಲಿ  ಪ್ರಾರಂಭಿಸಿದ ನೂತನ ಸ್ಟಡಿ ಸರ್ಕಲ್ ಎಂಬ ಸಂಸ್ಥೆ ಕೇವಲ 16 ವಿದ್ಯಾರ್ಥಿಗಳಿಂದ ಪ್ರಾರಂಭವಾಗಿ ಈಗ ಸುಮಾರು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕೊಡುವುದರಲ್ಲಿ ಎಲ್ಲರ ಕೂಡ ಸಹಾಯ& ಶ್ರಮ ಇದೆ.


ಗುರುವಾರ 2ಗಂಟೆಗೆ ಅನ್ ಅಕಾಡೆಮಿಯಲ್ಲಿ ಲೈವ್  ಬರುವ ನನ್ನ ಆತ್ಮೀಯ ಗೆಳೆಯ ಒಂದೇ ಊರಿನವರು ಆನಂದ ಮಾನಶೆಟ್ಟರ್,ಸಬ್ ಇನಸ್ ಪೆಕ್ಟರ್ ,ಬೆಂಗಳೂರು ನಗರ, ಈಗ ಇಲ್ಲಿ ಸುಮಾರು ವರ್ಷಗಳಿಂದ ಸಿವಿಲ್ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಇದು ಕೇವಲ ನನ್ನ ಒಂದು ಚಿಕ್ಕ ಕವನ ಕೇವಲ ಇವರ ಪರಿಚಯವನ್ನು ನಾನು ಮಾಡಿಕೊಟ್ಟಿದ್ದೇನೆ ಇದರ ಹಿಂದೆ ಇರುವ ಎಲ್ಲ ಕಠಿಣ ಪರಿಶ್ರಮಗಳು ಈಗ ಇವರ ಯಶೋಗಾಥೆಯನ್ನು ತಿಳಿಸುತ್ತದೆ.ಈ ರೀತಿ ಯಾವುದೇ ಗ್ರಾಮೀಣ ಭಾಗದವರು ಎಂದು ನೀವು ತಿಳಿಯದೆ ಎಲ್ಲರೂ ಕೂಡ‌ ಬಡತನವನ್ನು ಮೀರಿ ಕಷ್ಟಗಳನ್ನು ಮೀರಿ ತೊಂದರೆಗಳನ್ನು ಮರೆತು ಸಮಯಕ್ಕೆ ಬೆಲೆಕೊಟ್ಟು ಅನ‌ ಅಕಾಡೆಮಿ  ಹಲವಾರು  ಉತ್ತಮ ಶಿಕ್ಷಕರು ಪಾಠವನ್ನು ಮಾಡುತ್ತಿದ್ದಾರೆ .ಅವರ ಎಲ್ಲಾ ಪಾಠಗಳನ್ನು ಕೇಳಿ ಗಳನ್ನು ನೊಟ್ಸ ಮಾಡಿಕೊಂಡು ನಿಮ್ಮ ಜೀವನದಲ್ಲಿ ನೀವು ಕೂಡ ಯಶಸ್ಸನ್ನು ಕಾಣಲಿ ಅಂತ ಹೇಳುತ್ತಾ ನನ್ನ ಮೊದಲನೆಯ ಕಥಾಭಾಗವನ್ನು ಮುಗಿಸುತ್ತೇನೆ.


Mahesh Patted ,M.Sc.B.Ed & Journalism,

ಜ.ಸಾ.......🙏🙏🙏🙏🙏🙏

"/ತಹಶೀಲ್ದಾರ‌‌‌ ಹುದ್ದೆಗೆ ಆಯ್ಕೆಯಾದ‌ ಗ್ರಾಮೀಣ ಭಾಗದ ಯುವಕನ ಕಥೆ " ಗುರುರಾಜ ಛಲವಾದಿ #

  #ನನ್ನ ಆತ್ಮೀಯ ಗೆಳೆಯನ ಯಶೋಗಾಥೆಯ ಕಥೆ ಭಾಗ- 4  ರವಿವಾರ ಮಧ್ಯಾಹ್ನ #2:00PM ಗೆ  ಅನ್ ಅಕಾಡೆಮಿಯಲ್ಲಿ ಲೈವ್ ಬರುವವರ ಹೆಸರು ಶ್ರೀಯುತ ಗುರುರಾಜ್ ಚಲವಾದಿ( 2017- ಬ್ಯ...